

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ
ಒಂದು ನೋಟ
BIFFes ಎಂದೇ ಗುರುತಿಸಿಕೊಂಡಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಕರ್ನಾಟಕದ ಬೆಂಗಳೂರಿನಲ್ಲಿ ನಡೆಯುವ ಪ್ರಮುಖ ಸಾಂಸ್ಕೃತಿಕ ಉತ್ಸವ. ಕಳೆದ 13 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಈ ಸಿನಿಮಾ ಹಬ್ಬ, FlAPF ಮಾನ್ಯತೆಯನ್ನೂ ಹೊಂದಿದೆ. ಇದರ 14ನೇ ಆವೃತ್ತಿಯು 2023ರ ಮಾರ್ಚ್ 23ರಿಂದ 30ರವರೆಗೆ ನಡೆಯಲಿದೆ. 2006ರ ಮಾಗಿ ಕಾಲದಲ್ಲಿ ಆರಂಭವಾದ ಚಲನಚಿತ್ರೋತ್ಸವ ಇಂದು ಬೃಹತ್ ರೂಪವನ್ನು ಪಡೆದುಕೊಂಡಿದೆ. ಕಳೆದ 13 ವರ್ಷಗಳಲ್ಲಿ ಚಿತ್ರಪ್ರೇಮಿಗಳು ತಪ್ಪಿಸಿಕೊಳ್ಳಲಾಗದ ಉತ್ಸವವಾಗಿ ವಿಶೇಷ ಸ್ಥಾನಮಾನ ಗಳಿಸಿದೆ. ಗಾತ್ರ, ವ್ಯಾಪ್ತಿಯಲ್ಲೂ ವಿಸ್ತಾರಗೊಂಡಿದೆ. BIFFes ತನ್ನ 14ನೇ ಆವೃತ್ತಿಯಲ್ಲಿ ಭವ್ಯವಾದ ಮತ್ತು ಸಮೃದ್ಧವಾದ ಸಿನಿಮಾ ಅನುಭವವನ್ನು ನೀಡುವ ಉದ್ದೇಶವನ್ನು ಹೊಂದಿದೆ.


ಏಷಿಯನ್ ಸ್ಪರ್ಧಾ ವಿಭಾಗ
ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಪರಿಣಿತ ತೀರ್ಪುಗಾರರಿಂದ ಆಯ್ಕೆಯಾದ ಚಿತ್ರಗಳು ಸಮಕಾಲೀನ ಸಿನಿಮಾದ ಆಯಾಮಗಳನ್ನು ತೆರೆದಿಡುತ್ತದೆ. ಸಿನಿಮಾದ ಬದಲಾದ ಶೈಲಿ, ನಿರೂಪಣಾ ವೈಖರಿಗಳ ಪರಿಚಯಾತ್ಮಕ ನೋಟ ಇಲ್ಲಿದೆ.

ಭಾರತೀಯ ಸ್ಪರ್ಧಾ ವಿಭಾಗ

ಕನ್ನಡ ಸ್ಪರ್ಧಾ ವಿಭಾಗ
ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗ, ಪ್ರಸಕ್ತ ಸಾಲಿನಲ್ಲಿ ಕನ್ನಡ ಭಾಷೆಯಲ್ಲಿ ತಯಾರಾದ ಅತ್ಯುತ್ತಮ ಚಲನಚಿತ್ರಗಳ ಪ್ರದರ್ಶನವಾಗಲಿದೆ. ಪರಿಣಿತ ತೀರ್ಪುಗಾರರಿಂದ ಆಯ್ಕೆಯಾದ ಚಲನಚಿತ್ರಗಳು ಸೃಜನಾತ್ಮಕತೆಯ ಪ್ರತೀಕವಾಗಿರುತ್ತದಲ್ಲದೆ, ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹದಾಯಕವೂ ಆಗಿದೆ. ದೇಶವಿದೇಶಗಳ ಚಲನಚಿತ್ರ ವಿತರಕರ ಗಮನಸೆಳೆಯುವ ಈ ವೇದಿಕೆ, ಕನ್ನಡ ಚಿತ್ರಗಳು ವಿದೇಶಗಳಲ್ಲಿನ ಚಿತ್ರೋತ್ಸವಗಳಿಗೆ ಆಯ್ಕೆಯಾಗುವ ಅವಕಾಶವನ್ನೂ ಸೃಷ್ಟಿಸಿದೆ.

ವಿಶ್ವ ಸಿನಿಮಾ ವಿಭಾಗ
ವಿಶ್ವ ಸಿನಿಮಾ ವಿಭಾಗ, ವಿಶ್ವದ ಮೂಲೆಮೂಲೆಗಳಲ್ಲಿನ ಸಿನಿಮಾ ಕುರಿತಾದ ಚಿಂತನೆಗಳನ್ನು ಹಂಚುವ ವೇದಿಕೆಯಾಗಿದೆ. ಸಿನಿಮಾ ಕ್ಷೇತ್ರದಲ್ಲಿನ ಪ್ರತಿಭಾಶೋಧ, ಸಮಕಾಲೀನ ಸಿನಿಮಾಗಳ ವಸ್ತು ವೈವಿಧ್ಯ, ಬೆಳವಣಿಗೆಗಳು ಪರಿಚಯವಾಗಲಿವೆ. ಇದೊಂದು ಸಾಂಸ್ಕೃತಿಕ ವಿನಿಮಯ ವೇದಿಕೆಯಾಗುವುದರೊಂದಿಗೆ ಉಭಯ ದೇಶಗಳ ನಡುವಿನ ಸಾಮರಸ್ಯಕ್ಕೂ ಕಾರಣವಾಗಲಿದೆ.

ಫಿಪ್ರೆಸ್ಕಿ ಪ್ರಶಸ್ತಿ

ವಿ.ಕೆ. ಮೂರ್ತಿ ಶತಮಾನೋತ್ಸವ
ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ, ಕನ್ನಡಿಗ ವಿ.ಕೆ.ಮೂರ್ತಿ (1923-2014) ಅವರ ಶತಮಾನೋತ್ಸವ ವರ್ಷವಿದು. ಈ ಸಾಧಕನ ಸಾಧನೆ, 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರ ಚಲನಚಿತ್ರಗಳ ಪುನರಾವಲೋಕನದ ಮೂಲಕ ತೆರೆದುಕೊಳ್ಳಲಿದೆ.

ಕನ್ನಡ ಪನೋರಮಾ ಜನಪ್ರಿಯ ವಿಭಾಗ
14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಪನೋರಮಾ. ಈ ವಿಭಾಗದಲ್ಲಿ ಜನಪ್ರಿಯ ಕನ್ನಡ ಸಿನಿಮಾಗಳ ಪ್ರದರ್ಶನವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ವಹಿಸುತ್ತಿದೆ.
ಚಲನಚಿತ್ರೋತ್ಸವದ ವೇಳಾಪಟ್ಟಿ
ಸ್ಥಳ
ಪರದೆ
ಸಿನಿಮಾಗಳು
ಪ್ರದರ್ಶನ
ಇತ್ತೀಚಿನ ಸುದ್ದಿ
ಇಂಡೋನೇಷಿಯಾ, ಇರಾನ್ ಚಲನಚಿತ್ರಗಳಿಗೆ ಪ್ರಶಸ್ತಿ
ಹದಿನಾಲ್ಕನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಏಷಿಯನ್ ಚಲನಚಿತ್ರ ಸ್ಪರ್ಧಾ ವಿಭಾಗದಲ್ಲಿ ಇಂಡೋನೇಷಿಯಾದ ‘ಬಿಫೋರ್ ನೌ ಅಂಡ್ ದೆನ್’ ಹಾಗೂ ಇರಾನಿನ ‘ಮದರ್ ಲೆಸ್’ ಚಿತ್ರಗಳು ಮೊದಲ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದವು.
ಚಿತ್ರೋತ್ಸವದ ಕಡೆಯ ದಿನವೂ ನೂಕುನುಗ್ಗಲು
14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕೊನೆಯ ದಿನವಾದ ಗುರುವಾರ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಆಗಮಿಸುತ್ತಿದ್ದಾರೆ. ಒರಾಯನ್ ಮಾಲ್ ನಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಚಿತ್ರೋತ್ಸವದಲ್ಲಿ 55 ರಾಷ್ಟ್ರಗಳಿಂದ ಬಂದ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಂಡಿವೆ.
‘ಅತೀಂದ್ರಿಯ ಸಿನಿಮಾ: ಅಭಿವ್ಯಕ್ತಿಯ ಹುಡುಕಾಟ’
ಅತೀಂದ್ರಿಯ (ಟ್ರಾನ್ಸೆಂಡೆಂಟಲ್) ಕಥನಗಳ ಸಿನಿಮಾಗಳಲ್ಲಿ ಆಳವಾದ ಅಭಿವ್ಯಕ್ತಿಯ ಹುಡುಕಾಟವಿರುತ್ತದೆ ಮತ್ತು ಅದು ಪ್ರೇಕ್ಷಕನನ್ನು ತಾತ್ವಿಕವಾದ ಚಿಂತನೆಗೆ ಒಡ್ಡುತ್ತದೆ ಎಂದು ಶ್ರೀಲಂಕಾದ ಚಿತ್ರ ನಿರ್ದೇಶಕ ವಿಮುಕ್ತಿ ಜಯಸುಂದರ ಅವರು ಅಭಿಪ್ರಾಯಪಟ್ಟರು.
