SUBMISSION RULES, GUIDELINES & REGULATIONS for Films in
Competition Section
These regulations are applicable to the films invited to participate in the competition sections of the 16th edition of Bengaluru International Film Festival (BIFFes).
The 16th edition of BIFFes invites narrative fiction feature films for the Competition sections.
The Competitions are held under the Asian, Indian and Kannada Cinema categories. Expert committees will shortlist about 12 feature
films under each category for the final competition. The Chairman, Karnataka Chalanachitra Academy (KCA) and the Artistic Director,
BIFFes will have additional discretionary powers to augment the selection process. Asian Cinema Competition, The Indian and Kannada
cinema competition sections will have National and International Juries.
The final adjudication for all the competition sections will
be made by the Juries of the respective section.
Cash prizes, mementos and certificates will be issued for the winners of the competition in each category.
Prize details
Asian film competition section
First Best Film
Second Best Film
Third Best Film
Indian film competition section
First Best Film
Second Best Film
Third Best Film – International Critics Special Mention Film
Kannada film competition section
First Best Film
Second Best Film
Third Best Film
International Jury Special Mention Film
Note: Films from Karnataka sub languages / dialects, can also participate in the competition.
Competition Entry Norms:
1. Competition Categories:
A. ASIAN CINEMA COMPETITION
Feature fiction Films produced between January 1st, 2024 and 31st December 2024, in any of the Asian Countries,
of a minimum of 70 minutes’ duration are eligible to enter into the Asian competition section
B. CHITRABHARATHI – BIFFes forum for Indian Cinema
Feature fiction Films produced between January 1st, 2024 and 31st December 2024, in any of the Indian Languages including English and Indian dialects,
of a minimum of 70 minutes’ duration are eligible to enter into the competition section. Date of issue of Certificate
from the Central Board of Film Certification, Government of India, will be the date for the purpose of ascertaining the date of production.
C. KANNADA CINEMA COMPETITION – BIFFes forum for Kannada
Cinema
Feature fiction Films produced between January 1st, 2024 and 31st December 2024, in Kannada
and any of the dialects of the Karnataka state, of a minimum of 70 minutes’ duration are eligible
to enter into the competition section. Date of issue of Certificate from the Central Board of Film Certification,
will be the date for the purpose of ascertaining the date of production.
-
Films, which have been already submitted / considered for any competition section or exhibition at the earlier
editions of BIFFes, will not be eligible for reconsideration.
-
a. Films which have participated in other film festivals between January 1st, 2024 and 31st December,
2024 can apply for any competition section, adhering to the respective sections criterias.
b. Films which have participated in other film festivals prior to 1st January 2024, will not be eligible for any
competition section under this provision.
-
The final decision will be taken by the Chairman, KCA / Artistic Director of BIFFes,
in all matters connected with the selection and adjudication process.
-
Entry deadlines and selection of films
Submission of film: Online Film Application and online film screener link with English Subtitles must be submitted before 23th January 2025.
Films should be submitted online at
www.biffes.org.
With the following requirements, duly complete the entry form (available on our website).
For submission to the Indian and Kannada film competition categories, it is mandatory to provide a notarized certificate on
stamp paper with a minimum value of ₹20 (twenty rupees) or a maximum value of ₹100 (one hundred rupees). While purchasing the stamp paper,
the name of the Producer/ Production company/Director must be mentioned as the first party, and the 16th Bengaluru International Film Festival
(BIFFes) must be mentioned as the second party.
A single notarized certificate can be used to apply for three sections or any competition section/sections of the
applicant's choice, and the selected sections must be clearly mentioned. The certificate must confirm the film's completion date and indicate
agreement with the rules and regulations of the 16th Bengaluru International Film Festival.
Non-Indian Asian films must include a declaration form
authorised by the film Director and Producer / film production house,
declaring that their film was made between 1st January 2024 and 31st December 2024.
Kannada films, if eligible, can apply for any competition sections. Eligible Indian films can apply to both the Indian and Asian competition sections,
while non-Indian films from various Asian countries are eligible to apply only to the Asian Cinema competition section.
For the Asian Cinema competition section film entries, CBFC certificate is not mandatory.
Film Synopsis in English & In Kannada (For Kannada Cinema Competition)
Press Kit or Publicity Brochure (Soft copy only)
A brief Note on the Director
Film Stills & Posters of the film and Director's photograph, Name, address,
telephone / mobile number and email ID of the person submitting the film.
A non-refundable fee of Rs. 3000/- per entry for Indian films competing in Indian,
Kannada and Asian cinema competition sections is applicable. The fee should be transferred online through the payment gateway,
while submitting the film. The film submission to the competition section
will be disqualified in case of noncompliance of entry fee /payment terms.
There is no Submission Fee for the Non-Indian films applying for the Asian Cinema Competition.
Submitted film print content English subtitled - (DVD / Bluray / Pen Drive) of the Feature Film Screeners,
will be retained by BIFFes for its archives.
A list of films selected will be posted on the BIFFes website well in advance of
the commencement of the festival. The applicants of the selected films will be informed through an official email.
The film festival catalogue/book, Festival screening schedule, the festival venues,
seating capacities of each Screen and details of the films invited & participating will be available during the event.
5. Rules governing the film selection
BIFFes will appoint the Selection Committee comprising of filmmakers, experts on cinema and eminent persons from art, culture fields.
No person with any involvement in the films submitted will be present on the Jury panels or the Selection Committee.
There is no provision for screening of Kannada films not selected in the competition section of the Festival.
General Rules for the films in the Festival
6. Insurance & Shipping
BIFFes will incur shipping cost of the prints (and other approved formats) of the selected films.
All films will be imported using the BIFFes freight agent. The film festival will not be responsible for films imported by any other means.
English subtitled Film contents received in physical format will be sent back to the participants only to the address indicated in the entry form, or as instructed in writing, within three weeks of the festival closing date.
BIFFes will pay storage and insurance costs for selected films throughout the period in which the cinematographic materials are in the custody of BIFFes.
In case of print loss or damage, the liability of the festival authority will not exceed the value indicated in the official entry forms.
In the event of damage to a film’s physical print, any claims lodged by the lender of the
copy must be communicated to the festival, at the very latest, within two weeks of return of the print to the lender.
The festival shields itself against liability for the oldness of a print, by informing the lender by letter or email about
any deterioration of the print, after receiving the same.
Reimbursement for any eventual damage will be sent to the lender of the print in the lending place/country upon presentation of the invoice.
If the film prints selected for competition sections are in Encrypted DCP format, then the applicant should bear the costs of the KDM charges, for all the Film Festival screenings.
If the insurance company is obliged to reimburse damages only to the film festival authority, it shall immediately, upon receipt of this reimbursement, remit the sum to the lender of the copy.
7.The final physical print of each selected film must reach the sole shipping agent accredited by the festival authority, 3 weeks before the film festival dates. If film prints are not received by that time, the screening may be cancelled.
The import, distribution and non-commercial exhibition of all films to be presented in any section of the festival will be exempted from Customs' duty.
8. Copies for archives
Winners of awards may deposit an English-subtitled DVD/Blu-ray copy of the award-winning film for use by BIFFes for non-commercial, film academic and archival purposes.
9. Trailers and Promotions
Trailers and excerpts (not exceeding three minutes) may be sent for purposes of
publicity on TV and online media. If excerpts are not available, the filmmaker is requested to authorize
BIFFes to produce such excerpts. BIFFes has the authority to give maximum publicity to films being screened at the
film festival using electronic, print and online media.
10. No cuts or changes will be made in the films by the festival management for any reason. The Festival shall abide by the International Regulations on film screenings.
11. Films will be presented within the official section of the festival, only if they have been produced following professional cinematographic rules in the country of production and if their priority purpose is for normal and continued theatrical exhibition.
12. The film festival will not present any film to any person or organization (other than the selection committee and jury panels) before the official public screening or, eventually, before the general screening for journalists, unless specifically asked by the producer.
13. Participation in the film festival implies acceptance of all aforementioned regulations and selection conditions.
14.The Chairman, KCA / Artistic Director of the film festival has the authority to settle all cases not covered by the present rules.
15.If any information provided by the applicants in their applications is found to be incorrect, BIFFes reserves the right to reject such entries.
All the materials may be sent to the following address
Artistic Director,
Bengaluru International Film Festival
Karnataka Chalanachitra Academy,
Kannada Chalanachitra Amruthothsava Bhavana Complex,
#20/A, Circular Road, Nandini FHS Layout,
Near Nandini Layout Police Station, Next to Presidency School, Bengaluru-560 096.
+91 80-23494255 / 080 23493410 / +91 8904645529
Mon - Sat: 10.00am - 06.00pm
Email: biffesblr@gmail.com
Website: www.biffes.org
For Film Submission related queries, Contact - Submissions@biffes.org
Special Note:
-
Only English subtitled DCP format film print content will be accepted for the final festival days screening.
-
Feature Films content has to be in one of the following formats, for screening at the festival:
Physical DCP or digital delivery of the DCP through digital platforms.
(DCP digital delivery & KDM cost and expenses should be borne by the film team / Producer / Production house)
- Feature Films that have participated in other film festival competitions are also eligible.
- One representative from each film, that is part of the competition will be invited and offered to and fro travel (economy class air ticket) and 3 days of accommodation.
- All film submissions must be made online by the specified deadline.
- Feature Films selected in the festival cannot be withdrawn from the program after 15th February 2025.
- The above regulations takes effect with the submission of a completed film entry form.
ALL THE ABOVE REGULATIONS AND THE CONDUCT OF THE FESTIVAL ARE SUBJECT TO ANY SPECIAL GUIDELINES ISSUED NOW AND IN THE SUBSEQUENT PERIOD BY THE APPROPRIATE AUTHORITIES.
Online film submissions open on 09.01.2025
Last date for film submission is 23.01.2025
ಚಲನಚಿತ್ರ ಸ್ಪರ್ಧಾ ವಿಭಾಗ: ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳು
ಬೆಂಗಳೂರು ನಗರದಲ್ಲಿ ನಡೆಯುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಸ್ಪರ್ಧಾತ್ಮಕ ವಿಭಾಗಗಳಿಗೆ ಕಥಾನಕ ಚಿತ್ರಗಳನ್ನು ಆಹ್ವಾನಿಸುತ್ತಿದೆ. ಈ ವರ್ಷದ ಮಾರ್ಚ್ 1 ರಿಂದ 8 ರವರೆಗೆ, ನಡೆಯುವ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವ ಚಲನಚಿತ್ರಗಳಿಗೆ ಈ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳು ಅನ್ವಯಿಸುತ್ತದೆ.
ಸ್ಪರ್ಧೆಯು ಏಷಿಯಾ, ಭಾರತೀಯ ಹಾಗೂ ಕನ್ನಡ ಸಿನಿಮಾ ಎಂಬ ಮೂರು ವಿಭಾಗಗಳಲ್ಲಿರುತ್ತದೆ. ಪರಿಣಿತರ ಸಮಿತಿಗಳು ಸ್ಪರ್ಧೆಗೆ ಬಂದ ಚಿತ್ರಗಳನ್ನು ವೀಕ್ಷಿಸಿ, ಅಂತಿಮ ಸುತ್ತಿಗೆ ಮೂರು ವಿಭಾಗಗಳಿಂದ ತಲಾ 12 ಕಥಾಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಏಷಿಯಾ, ಭಾರತೀಯ ಹಾಗೂ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಆಯ್ಕೆಯಾದ ಚಲನಚಿತ್ರಗಳನ್ನು ಅಂತಿಮವಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತೀರ್ಪುಗಾರರು ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಗಾಗಿ ಆಯ್ಕೆ ಮಾಡುತ್ತಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರು ಅಗತ್ಯವಾದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ಧಾರ ಕೈಗೊಳ್ಳಬಹುದಾದ ವಿಶೇಷ ಅಧಿಕಾರವನ್ನು ಹೊಂದಿರುತ್ತಾರೆ.
ಪ್ರಶಸ್ತಿಯ ವಿವರ
ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ
ಮೊದಲನೆಯ ಅತ್ಯುತ್ತಮ ಚಲನಚಿತ್ರ
ಎರಡನೇ ಅತ್ಯುತ್ತಮ ಚಲನಚಿತ್ರ
ಮೂರನೇ ಅತ್ಯುತ್ತಮ ಚಲನಚಿತ್ರ
ಚಿತ್ರಭಾರತಿ (ಭಾರತೀಯ ಸಿನಿಮಾ) ಸ್ಪರ್ಧಾ ವಿಭಾಗ
ಮೊದಲನೆಯ ಅತ್ಯುತ್ತಮ ಚಲನಚಿತ್ರ
ಎರಡನೇ ಅತ್ಯುತ್ತಮ ಚಲನಚಿತ್ರ
ಮೂರನೇ ಅತ್ಯುತ್ತಮ ಚಲನಚಿತ್ರ - ಅಂತಾರಾಷ್ಟ್ರೀಯ ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರ
ಅಂತಾರಾಷ್ಟ್ರೀಯ ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರ
ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ
ಮೊದಲನೆಯ ಅತ್ಯುತ್ತಮ ಚಲನಚಿತ್ರ
ಎರಡನೇ ಅತ್ಯುತ್ತಮ ಚಲನಚಿತ್ರ
ಮೂರನೇ ಅತ್ಯುತ್ತಮ ಚಲನಚಿತ್ರ
ಅಂತಾರಾಷ್ಟ್ರೀಯ ತೀರ್ಪುಗಾರರ ಮೆಚ್ಚುಗೆ ಪಡೆದ ಚಿತ್ರ.
ಸೂಚನೆ: ಕರ್ನಾಟಕದ ಉಪಭಾಷಾ ಚಲನಚಿತ್ರಗಳಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ.
ಮೂರು ಸ್ಪರ್ಧಾತ್ಮಕ ಚಲನಚಿತ್ರ ವಿಭಾಗಗಳಲ್ಲಿ ಆಯಾ ವಿಭಾಗಗಳ ತೀರ್ಪುಗಾರರು ನೀಡುವ ತೀರ್ಮಾನವೇ ಅಂತಿಮ. ಅಗತ್ಯವಿದ್ದಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಮತ್ತು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರು ವಿಶೇಷ ಅಧಿಕಾರವನ್ನು ಬಳಸಿ ವಿಶೇಷ ಉಲ್ಲೇಖ ನೀಡಬಹುದು.
ಪ್ರತಿಯೊಂದು ವಿಭಾಗದಲ್ಲೂ ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ವಿಜೇತರಿಗೆ ನೀಡಲಾಗುವುದು.
ಸ್ಪರ್ಧೆಗೆ ಪ್ರವೇಶ ನಿಯಮಗಳು
ಸ್ಪರ್ಧಾತ್ಮಕ ವಿಭಾಗಗಳು
ಅ) ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ
ಏಷಿಯದ ಯಾವುದೇ ದೇಶದಲ್ಲಿ 01.01.2024 ರಿಂದ 31.12.2024 ರ ಅವಧಿಯಲ್ಲಿ ತಯಾರಾದ ಕನಿಷ್ಠ 70 ನಿಮಿಷದ ಅವಧಿಯ ಕಥಾ ಚಿತ್ರಗಳು ಚಲನಚಿತ್ರ ಸ್ಪರ್ಧೆಗೆ ಅರ್ಹವಿರುತ್ತವೆ.
ಆ) ಚಿತ್ರಭಾರತಿ - ಭಾರತೀಯ ಸಿನಿಮಾಗಳಿಗೊಂದು ವೇದಿಕೆ
01.01.2024 ರಿಂದ 31.12.2024 ರ ಅವಧಿಯಲ್ಲಿ ಇಂಗ್ಲಿಷ್ ಹಾಗೂ ಯಾವುದೇ ಉಪಭಾಷೆಗಳು ಸೇರಿದಂತೆ ಯಾವುದೇ ಭಾರತೀಯ ಭಾಷೆಯಲ್ಲಿ ತಯಾರಾದ ಕನಿಷ್ಠ 70 ನಿಮಿಷಗಳ ಅವಧಿಯ ಕಥಾ ಚಿತ್ರಗಳು ಈ ಸ್ಪರ್ಧಾ ವಿಭಾಗದಲ್ಲಿ ಪ್ರವೇಶಕ್ಕೆ ಅರ್ಹವಿರುತ್ತವೆ. ಈ ಚಲನಚಿತ್ರಗಳು ಭಾರತ ಸರ್ಕಾರದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ನೀಡುವ ಪ್ರಮಾಣಪತ್ರದಲ್ಲಿ ನಮೂದಾಗುವ ದಿನಾಂಕವನ್ನೇ ಚಲನಚಿತ್ರ ನಿರ್ಮಾಣವಾದ ದಿನಾಂಕಕ್ಕೆ ಪರಿಗಣಿಸಲಾಗುತ್ತದೆ.
ಇ) ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ
01.01.2024 ರಿಂದ 31.12.2024 ರ ಅವಧಿಯಲ್ಲಿ ಕನ್ನಡ ಹಾಗೂ ರಾಜ್ಯದ ಯಾವುದೇ ಉಪಭಾಷೆಯಲ್ಲಿ ತಯಾರಾದ ಕನಿಷ್ಠ 70 ನಿಮಿಷಗಳ ಅವಧಿಯ ಕಥಾ ಚಿತ್ರಗಳು ಈ ಸ್ಪರ್ಧಾ ವಿಭಾಗದಲ್ಲಿ ಪ್ರವೇಶಕ್ಕೆ ಅರ್ಹವಿರುತ್ತವೆ. ಈ ಚಲನಚಿತ್ರಗಳು ಭಾರತ ಸರ್ಕಾರದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ನೀಡುವ ಪ್ರಮಾಣಪತ್ರದಲ್ಲಿ ನಮೂದಾಗುವ ದಿನಾಂಕವನ್ನೇ ಚಲನಚಿತ್ರ ನಿರ್ಮಾಣವಾದ ದಿನಾಂಕಕ್ಕೆ ಪರಿಗಣಿಸಲಾಗುತ್ತದೆ.
-
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹಿಂದಿನ ಆವೃತ್ತಿಗಳಲ್ಲಿ ಸ್ಪರ್ಧೆಗೆ ಸಲ್ಲಿಸಲ್ಪಟ್ಟ, ಯಾವುದೇ ಸ್ಪರ್ಧೆಗೆ ಪರಿಗಣನೆಯಾಗಿದ್ದ ಇಲ್ಲವೇ ಪ್ರದರ್ಶನಗೊಂಡಿದ್ದ ಚಲನಚಿತ್ರಗಳು ಮರುಸ್ಪರ್ಧೆಗೆ ಅರ್ಹವಾಗಿರುವುದಿಲ್ಲ.
-
ಅರ್ಜಿ ಸಲ್ಲಿಸಲು ಬಯಸುವ ಚಲನಚಿತ್ರಗಳು ಮೇಲ್ಕಂಡ ಎಲ್ಲಾ ಮಾನದಂಡಗಳಿಗೆ ಬದ್ಧವಾಗಿದ್ದು, ಜನವರಿ 1, 2024 ರಿಂದ 31 ಡಿಸೆಂಬರ್ 2024ರ ಸಮಯದಲ್ಲಿ ನಡೆದ ಯಾವುದೇ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರೂ ಸಹ ಅರ್ಜಿ ಸಲ್ಲಿಸಲು ಅರ್ಹವಾಗಿರುತ್ತವೆ.
-
ಅರ್ಜಿ ಸಲ್ಲಿಸಲು ಬಯಸುವ ಚಲನಚಿತ್ರಗಳು ಈಗಾಗಲೇ ಜನವರಿ 1, 2024ರ ಮುಂಚಿನ ಯಾವುದೇ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರೆ, 16ನೇ ಬಿಫೆಸ್ ಆವೃತ್ತಿಯ ಸ್ಪರ್ಧಾ ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ.
-
ಚಲನಚಿತ್ರಗಳ ಆಯ್ಕೆಗೆ ಸಂಬಂಧಪಟ್ಟಂತೆ ಹಾಗೂ ತೀರ್ಪು ಪ್ರಕ್ರಿಯೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ.
-
ಚಲನಚಿತ್ರಗಳನ್ನು ಸಲ್ಲಿಸಲು ಕಡೆಯ ದಿನಾಂಕ ಹಾಗೂ ಆಯ್ಕೆ ವಿಧಾನ
ಸ್ಪರ್ಧಾ ವಿಭಾಗಗಳಿಗೆ ಚಲನಚಿತ್ರಗಳನ್ನು ಇಂಗ್ಲಿಷ್ ಉಪಶೀರ್ಷಿಕೆಯೊಂದಿಗೆ (ಸಬ್ಟೈಟಲ್) ಮತ್ತು ಆನ್ಲೈನ್ ಸ್ಕ್ರೀನ್ ಲಿಂಕ್ ಜೊತೆ ಅರ್ಜಿಯನ್ನು ಜನವರಿ 23, 2025 ರೊಳಗೆ ಸಲ್ಲಿಸುವುದು ಕಡ್ಡಾಯ. ಚಲನಚಿತ್ರಗಳನ್ನು ಆನ್ ಲೈನ್ ನಲ್ಲಿ www.biffes.org ಮೂಲಕ ಸಲ್ಲಿಸಬೇಕು. ಅಲ್ಲದೇ biffesblr@gmail.com & fcbiffes@gmail.com ಗೆ ಕಳುಹಿಸಿರುವ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಕೆಳಕಂಡ ವಿವರಗಳನ್ನು ಸಲ್ಲಿಸಬೇಕು.
ಅರ್ಜಿಯ ಮಾದರಿ (ನಮ್ಮ ಜಾಲಾತಾಣದಲ್ಲಿ (ವೆಬ್ಸೈಟ್) ದೊರಕುತ್ತದೆ)
ಭಾರತೀಯ ಮತ್ತು ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗಕ್ಕೆ ಸಲ್ಲಿಸುವ ಸಿನಿಮಾಗಳು ಕನಿಷ್ಠ ರೂ.20/-(ಇಪ್ಪತ್ತು ರೂಪಾಯಿಗಳ) ಗರಿಷ್ಠ ರೂ.100/- (ನೂರು ರೂಪಾಯಿಗಳ) ಛಾಪಾ ಕಾಗದದಲ್ಲಿ (ಸ್ಟಾಂಪ್ ಪೇಪರ್) ನೋಟರಿಯವರಿಂದ ಪ್ರಮಾಣೀಕರಿಸಿದ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಛಾಪ ಕಾಗದ (ಸ್ಟಾಂಪ್ ಪೇಪರ್) ಕೊಳ್ಳುವಾಗ ಮೊದಲನೇ ಪಾರ್ಟಿಯಾಗಿ ನಿರ್ಮಾಪಕ, ನಿರ್ಮಾಣ ಸಂಸ್ಥೆ ಅಥವಾ ನಿರ್ದೇಶಕರ ಹೆಸರನ್ನು ನಮೂದಿಸಬೇಕು. ಎರಡನೇ ಪಾರ್ಟಿಯಾಗಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಬಿಫೆಸ್)ದ ಹೆಸರನ್ನು ಸೂಚಿಸಬೇಕು. ಒಂದೇ ಪ್ರಮಾಣಪತ್ರದಲ್ಲಿ ಮೂರು ವಿಭಾಗಗಳಿಗೆ ಅಥವಾ ಅವರ ಇಚ್ಛೆಯ ಯಾವುದಾದರೂ ಸ್ಪರ್ಧಾ ವಿಭಾಗಕ್ಕೆ/ ವಿಭಾಗಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದ್ದು, ಆಯ್ಕೆ ಮಾಡಿಕೊಂಡ ವಿಭಾಗಗಳನ್ನು ಸ್ಪಷ್ಟವಾಗಿ ನಮೂದಿಸಬೇಕು, ಪ್ರಮಾಣ ಪತ್ರದಲ್ಲಿ ಚಲನಚಿತ್ರ ಪೂರ್ಣಗೊಂಡ ದಿನಾಂಕದ ಬಗ್ಗೆ ಧೃಡೀಕರಿಸಿರಬೇಕು ಹಾಗೂ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ನಿಯಮಾವಳಿಗಳ ಬಗ್ಗೆ ಒಪ್ಪಿಗೆ ಸೂಚಿಸಿರಬೇಕು.
ಜೊತೆಯಲ್ಲಿ ಈ ಕೆಳಕಂಡ ಮಾಹಿತಿಗಳಿರಬೇಕು
- ಯಾವುದೇ ಸ್ಪರ್ಧಾತ್ಮಕ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಕನ್ನಡ ಸಿನಿಮಾಗಳ ಕಥೆಯ ಸಂಕ್ಷಿಪ್ತ ಸಾರಾಂಶ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಇರಬೇಕು.
- ಪ್ರಚಾರ ಸಾಮಾಗ್ರಿಗಳು. (ಸಾಫ್ಟ್ ಕಾಪಿ ಮಾತ್ರ)
- ಚಲನಚಿತ್ರದ ನಿರ್ದೇಶಕರ ಕಿರು ಪರಿಚಯ ಮತ್ತು ಚಿತ್ರದ ಕುರಿತು ಟಿಪ್ಪಣಿ.
- ಚಿತ್ರದ ನಿರ್ದೇಶಕರ ಭಾವಚಿತ್ರ (ಸಾಫ್ಟ್ ಕಾಪಿ ಮಾತ್ರ), ಚಲನಚಿತ್ರಕ್ಕೆ ಸಂಬಂಧಪಟ್ಟ ಸ್ಥಿರಚಿತ್ರ, ಪ್ರಚಾರ ಪತ್ರ, ಹೆಸರು, ವಿಳಾಸ, ದೂರವಾಣಿ/ಮೊಬೈಲ್ ನಂಬರ್ ಮತ್ತು ಚಲನಚಿತ್ರ ಸಲ್ಲಿಸುವವರ ಇಮೇಲ್ ಐಡಿ. ಹಾಗೆಯೇ ಚಿತ್ರದ ನಿರ್ಮಾಪಕರ, ಕಲಾವಿದರ ಮತ್ತು ತಾಂತ್ರಿಕ ವಿಭಾಗದವರ ವಿವರ ನೀಡಬೇಕು.
-
ಸ್ಪರ್ಧೆಗೆ ಪ್ರವೇಶಿಸುವ ಏಷಿಯನ್, ಭಾರತೀಯ ಮತ್ತು ಕನ್ನಡ ಚಲನಚಿತ್ರಗಳಿಗೆ ಪ್ರವೇಶ ಶುಲ್ಕವಾಗಿ ಪ್ರತಿ ವಿಭಾಗದಿಂದ ತಲಾ ರೂ.3000/-(ಮೂರು ಸಾವಿರ ರೂಪಾಯಿಗಳು)ಗಳನ್ನು ನಿಗದಿ ಪಡಿಸಲಾಗಿದೆ. ಈ ಪ್ರವೇಶ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ. ಪ್ರವೇಶ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ನಿಗದಿತ ಸಮಯದೊಳಗೆ ಆಯಾ ಸ್ಪರ್ಧಾತ್ಮಕ ವಿಭಾಗಕ್ಕೆ ಚಲನಚಿತ್ರದ ಪ್ರವೇಶ ಶುಲ್ಕವು ಪಾವತಿಯಾಗದಿದ್ದಲ್ಲಿ ಸಲ್ಲಿಕೆಯು ಅನೂರ್ಜಿತವಾಗುತ್ತದೆ.
-
ಮೇಲ್ಕಂಡ ಮಾನದಂಡಗಳಿಗೆ ಒಳಪಡುವ / ಅರ್ಹವಿರುವ ಕನ್ನಡ ಚಲನಚಿತ್ರಗಳು ಚಿತ್ರೋತ್ಸವದ ಎಲ್ಲಾ ಸ್ಪರ್ಧಾ ವಿಭಾಗಗಳಿಗೆ ಅಥವಾ ಅವರ ಇಚ್ಛೆಯ ಯಾವುದಾದರೂ ಸ್ಪರ್ಧಾ ವಿಭಾಗಕ್ಕೆ / ಸ್ಪರ್ಧಾ ವಿಭಾಗಗಳಿಗೆ ಅರ್ಜಿ ಸಲ್ಲಿಸಬಹುದು.
-
ಸ್ಪರ್ಧೆಗೆ ಸಲ್ಲಿಸಲಾದ ಚಲನಚಿತ್ರಗಳ ಪ್ರತಿಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿಯು ಅಕಾಡೆಮಿಯ ಚಲನಚಿತ್ರ ಭಂಡಾರದಲ್ಲಿ ಕಾಯ್ದಿರಿಸುತ್ತದೆ.
-
ಆಯ್ಕೆಯಾದ ಚಲನಚಿತ್ರಗಳ ಪಟ್ಟಿಯನ್ನು ಬಿಫೆಸ್(BIFFes) ಜಾಲತಾಣದಲ್ಲಿ ಚಲನಚಿತ್ರೋತ್ಸವ ಆರಂಭಕ್ಕೂ ಮುನ್ನ ಪ್ರಕಟಿಸಲಾಗುತ್ತದೆ. ಆಯ್ಕೆಯಾದ ಚಲನಚಿತ್ರಗಳಿಗೆ ಸಂಬಂಧಪಟ್ಟವರಿಗೆ ಅಧಿಕೃತ ಇಮೇಲ್ ಮೂಲಕ ತಿಳಿಸಲಾಗುತ್ತದೆ.
-
ಏಷಿಯನ್ ಸ್ಪರ್ಧಾ ವಿಭಾಗದಲ್ಲಿ ಅರ್ಜಿ ಸಲ್ಲಿಸುವ ಭಾರತೇತರ ಏಷಿಯಾ ಖಂಡದ ದೇಶಗಳ ಚಲನಚಿತ್ರಗಳಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
-
ಚಲನಚಿತ್ರೋತ್ಸವದ ಸಂದರ್ಭದಲ್ಲಿ ಚಿತ್ರೋತ್ಸವಕ್ಕೆ ಸಂಬಂಧಿಸಿದ ಮಾಹಿತಿ ಪುಸ್ತಕ ಮತ್ತು ಪ್ರದರ್ಶನದ ವೇಳಾಪಟ್ಟಿಯು ಚಿತ್ರೋತ್ಸವ ನಡೆಯುವ ಮುಖ್ಯ ಸ್ಥಳದಲ್ಲಿ ದೊರೆಯುತ್ತದೆ.
6. ಚಲನಚಿತ್ರ ಆಯ್ಕೆ ನಿಯಮ
ಚಲನಚಿತ್ರರಂಗದ ಅನುಭವಿಗಳು, ತಜ್ಞರು ಮತ್ತು ಇತರ ಕ್ಷೇತ್ರಗಳ ಗಣ್ಯರನ್ನೊಳಗೊಂಡ ಆಯ್ಕೆ ಸಮಿತಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕೋರ್ ಸಮಿತಿಯು ನೇಮಕಮಾಡುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮ.
ಸ್ಪರ್ಧೆಗೆ ಸಲ್ಲಿಕೆಯಾದ ಚಲನಚಿತ್ರಗಳಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ ಆಯ್ಕೆ ಸಮಿತಿಯಲ್ಲಿ ಇರುವಂತಿಲ್ಲ.
ಸ್ಪರ್ಧಾ ವಿಭಾಗಕ್ಕೆ ಬಂದ ಚಲನಚಿತ್ರಗಳಲ್ಲಿ ಆಯ್ಕೆಯಾಗದ ಚಿತ್ರಗಳನ್ನು, ಚಿತ್ರೋತ್ಸವದಲ್ಲಿ ಪ್ರದರ್ಶಿಸಲು ಅವಕಾಶವಿಲ್ಲ, ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.
ಚಿತ್ರೋತ್ಸವದಲ್ಲಿ ಭಾಗವಹಿಸುವ ಚಲನಚಿತ್ರಗಳಿಗೆ ಸಾಮಾನ್ಯ ನಿಯಮಗಳು
7. ಆಯ್ಕೆಯಾದ ಚಲನಚಿತ್ರಗಳಿಗೆ ವಿಮೆ ಮತ್ತು ಸಾಗಣೆ ವೆಚ್ಚ
ಆಯ್ಕೆಯಾದ ಚಲನಚಿತ್ರಗಳ ಸಾಗಣೆ ವೆಚ್ಚವನ್ನು ಬಿಫೆಸ್ ಭರಿಸುತ್ತದೆ.
ಬಿಫೆಸ್ನ ಅಧಿಕೃತ ಏಜೆಂಟರ ಮೂಲಕ ಎಲ್ಲ ಚಲನಚಿತ್ರಗಳನ್ನು ಆಮದು ಮಾಡಿಕೊಳ್ಳಲಾಗುವುದು. ಬೇರೆ ಯಾವುದೇ ಮಾರ್ಗದಲ್ಲಿ ಆಮದಾಗುವ ಚಲನಚಿತ್ರಗಳ ಬಗ್ಗೆ ಚಲನಚಿತ್ರೋತ್ಸವ ಸಮಿತಿ ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗಿರುವುದಿಲ್ಲ.
ಚಿತ್ರೋತ್ಸವ ಪ್ರಕ್ರಿಯೆ ಮುಗಿದ ನಂತರ ಪ್ರವೇಶ ಅರ್ಜಿಯಲ್ಲಿ ನಮೂದಿಸಿರುವ ವಿಳಾಸಕ್ಕೆ ಸಂಬಂಧಪಟ್ಟವರಿಗೆ ಚಲನಚಿತ್ರದ ಫಿಸಿಕಲ್ ಪ್ರಿಂಟ್ಗಳನ್ನು ಹಿಂತಿರುಗಿಸಲಾಗುತ್ತದೆ. ಆದ್ದರಿಂದ ವಿಳಾಸದ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು.
ಚಿತ್ರೋತ್ಸವಕ್ಕೆ ಆಯ್ಕೆಯಾದ ಚಿತ್ರದ ಫಿಸಿಕಲ್ ಪ್ರಿಂಟ್ಗಳ ದಾಸ್ತಾನು ಮತ್ತು ವಿಮೆ ಸುರಕ್ಷತಾ ಮೊತ್ತವನ್ನು ತನ್ನ ಅಧೀನದಲ್ಲಿರುವ ಅವಧಿಯವರೆಗೆ ಬಿಫೆಸ್ ಭರಿಸುತ್ತದೆ. ಒಂದೊಮ್ಮೆ ಫಿಸಿಕಲ್ ಪ್ರಿಂಟ್ ನಲ್ಲಿ ಯಾವುದೇ ನಷ್ಟ ಇಲ್ಲವೇ ಹಾನಿಯಾದ ಸಂದರ್ಭದಲ್ಲಿ, ಅಧಿಕೃತ ಪ್ರವೇಶ ಪತ್ರದಲ್ಲಿ ನಮೂದಿಸಿದ ಮೊತ್ತದ ವಿವರವನ್ನು ಮಾತ್ರ ಚಿತ್ರೋತ್ಸವದ ಆಡಳಿತ ಮಂಡಳಿ ಪರಿಗಣಿಸುತ್ತದೆ. ವಿಮೆ ಕಂಪನಿಯು ನಷ್ಟ ಪರಿಹಾರವನ್ನು ಚಿತ್ರೋತ್ಸವ ಸಮಿತಿಗೆ ಮಾತ್ರ ನೀಡಲಿದ್ದು, ಆ ಸಂಸ್ಥೆಯಿಂದ ಪರಿಹಾರ ಧನ ಬಂದ ಕೂಡಲೇ ಸಂಬಂಧಪಟ್ಟವರಿಗೆ ವರ್ಗಾಯಿಸಲಾಗುವುದು.
ಚಲನಚಿತ್ರಗಳ ಫಿಸಿಕಲ್ ಪ್ರಿಂಟ್ಗಳನ್ನು ಹಿಂತಿರುಗಿಸಲಾದ ಎರಡು ವಾರಗಳಲ್ಲಿ ಯಾವುದೇ ನಷ್ಟ ಇಲ್ಲವೇ ಹಾನಿ ಸಂಭವಿಸಿದ ಕುರಿತು ಚಿತ್ರೋತ್ಸವ ಸಮಿತಿಗೆ ವರದಿ ಸಲ್ಲಿಸಬೇಕು. ಅಕಸ್ಮಾತ್ ಸಂಭವಿಸಿದ ನಷ್ಟಕ್ಕೆ ಸಂಬಂಧಪಟ್ಟಂತೆ ಯಾವುದೇ ನಷ್ಟ ಪರಿಹಾರಕ್ಕೆ ಅಧಿಕೃತ ಮನವಿ ಸಲ್ಲಿಸಬೇಕಾಗುತ್ತದೆ.
ಚಲನಚಿತ್ರ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾದ ಚಲನಚಿತ್ರಗಳು ಡಿಸಿಪಿ / ಡಿಜಿಟಲ್ ಪ್ರಸಾರದ ಫಾರ್ಮೆಟ್ ನಲ್ಲಿರಬೇಕು. ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಂಬಂಧ ಕೆಡಿಎಂ ವೆಚ್ಚವನ್ನು ಅರ್ಜಿದಾರರೇ ಭರಿಸಬೇಕು.
8. ಚಿತ್ರೋತ್ಸವಕ್ಕೆ ಆಯ್ಕೆಯಾದ ಚಲನಚಿತ್ರಗಳ ಫಿಸಿಕಲ್ ಪ್ರಿಂಟನ್ನು ಚಿತ್ರೋತ್ಸವದ ಸಮಿತಿಯು ಸೂಚಿಸುವ ಸಾಗಣೆ ಸಂಸ್ಥೆಯ ಮೂಲಕವೇ ರವಾನಿಸಬೇಕು. ನಿಗದಿತ ವೇಳೆಗೆ ಚಲನಚಿತ್ರಗಳ ಪ್ರಿಂಟ್ಗಳು ಲಭ್ಯವಾಗದಿದ್ದರೆ ಪ್ರದರ್ಶನ ರದ್ದುಗೊಳಿಸಲಾಗುವುದು. ಚಿತ್ರೋತ್ಸವದ ಯಾವುದೇ ವಿಭಾಗಗಳಲ್ಲಿ ಪ್ರದರ್ಶನಗೊಳ್ಳುವ ಎಲ್ಲ ಚಲನಚಿತ್ರಗಳ ಆಮದು, ವಿತರಣೆ, ಹಾಗೂ ವಾಣಿಜ್ಯೇತರ ಪ್ರದರ್ಶನಗಳಿಗೆ ಸುಂಕ ವಿನಾಯಿತಿ ಪಡೆಯಲಾಗುತ್ತದೆ.
9. ಪ್ರಶಸ್ತಿ ಪಡೆದ ಚಲನಚಿತ್ರಗಳ ಇಂಗ್ಲಿಷ್ ಉಪ ಶೀರ್ಷಿಕೆ (ಸಬ್ಟೈಟಲ್) ಇರುವ ಚಿತ್ರದ ಪ್ರತಿಗಳನ್ನು ನೀಡಿದ್ದಲ್ಲಿ, ಆ ಪ್ರತಿಗಳನ್ನು ಬಿಫೆಸ್ ಸಿನಿಮಾ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು.
ಟ್ರೈಲರ್ ಮತ್ತು ಪ್ರಚಾರ
10. ಟಿವಿ ಮತ್ತು ಆನ್ಲೈನ್ನಲ್ಲಿ ಪ್ರಚಾರಕ್ಕೆ ಬಳಸುವ ಸಲುವಾಗಿ ಮೂರು ನಿಮಿಷಕ್ಕೆ ಮೀರದಂತೆ ಟ್ರೈಲರ್ ಹಾಗೂ ಟೀಸರ್, ಸ್ಥಿರ ಚಿತ್ರಗಳನ್ನು ಕಳುಹಿಸಬಹುದು. ಈ ರೀತಿ ಕಳುಹಿಸಲು ಸಾಧ್ಯವಾಗದಿದ್ದರೆ ಪ್ರಚಾರ ಕಾರ್ಯವನ್ನು ಬಿಫೆಸ್ ಮೂಲಕವೇ ಮಾಡಲು ಅನುಮತಿ ನೀಡುವುದು ಅಗತ್ಯ. ಎಲ್ಲ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲು ಬಿಫೆಸ್ ಅಧಿಕಾರ ಹೊಂದಿರುತ್ತದೆ.
11. ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಪ್ರದರ್ಶನ ನಿಯಮಾವಳಿಗೆ ಬದ್ಧವಾಗಿರುತ್ತದೆ. ಪ್ರದರ್ಶನಗೊಳ್ಳುವ ಯಾವುದೇ ಚಲನಚಿತ್ರಗಳನ್ನು ಕತ್ತರಿಸಿಯಾಗಲಿ, ಬದಲಿಸುವುದಾಗಲಿ ಯಾವುದೇ ಕಾರಣಕ್ಕೂ ಮಾಡುವಂತಿಲ್ಲ.
12. ಚಿತ್ರೋತ್ಸವಕ್ಕೆ ಬಂದ ಚಲನಚಿತ್ರಗಳನ್ನು ಚಿತ್ರೋತ್ಸವದ ಅಧಿಕೃತ ಸಮಿತಿಯೇ ಸಾರ್ವಜನಿಕ ಪ್ರದರ್ಶನಕ್ಕೆ ಮುನ್ನ ಪರಿಶೀಲಿಸಿ ಆಯಾ ದೇಶದ ಚಲನಚಿತ್ರ ನಿಯಮಾವಳಿಗಳಿಗೆ ಅನುಸಾರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿದೆ.
13. ಚಲನಚಿತ್ರಗಳ ಅಧಿಕೃತ ಸಾರ್ವಜನಿಕ ಪ್ರದರ್ಶನಕ್ಕೆ ಮುನ್ನ, ಚಿತ್ರೋತ್ಸವ ಸಮಿತಿಯು ಯಾವುದೇ ಸಂಸ್ಥೆಗೆ ಇಲ್ಲವೇ ಯಾವುದೇ ವ್ಯಕ್ತಿಗೆ (ಆಯ್ಕೆ ಸಮಿತಿ, ಜ್ಯೂರಿಗಳನ್ನು ಹೊರತು ಪಡಿಸಿ) ನೀಡುವಂತಿಲ್ಲ.
14. ಚಲನಚಿತ್ರೋತ್ಸವದಲ್ಲಿ ಭಾಗವಹಿಸುವುದು ಆಯ್ಕೆಯ ಷರತ್ತುಗಳು ಹಾಗೂ ನಿಯಮಾವಳಿಗಳಿಗೆ ಒಪ್ಪಿಗೆ ನೀಡುವ ಮೂಲಕ ಅಧಿಕೃತಗೊಳ್ಳಲಿದೆ.
15. ಪ್ರಸ್ತುತ ಇರುವ ನಿಯಮಾವಳಿಗಳಲ್ಲಿ ಒಳಗೊಳ್ಳದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಅಧಿಕಾರವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರು ಹೊಂದಿರುತ್ತಾರೆ.
16. ಅರ್ಜಿದಾರರು ಸಲ್ಲಿಸಿರುವ ಅರ್ಜಿಯಲ್ಲಿ ನೀಡುವ ಯಾವುದೇ ಮಾಹಿತಿ ತಪ್ಪಾಗಿದ್ದರೆ, ಅಂತಹ ಪ್ರವೇಶವನ್ನು ತಿರಸ್ಕರಿಸುವ ಹಕ್ಕುಗಳನ್ನು ಬಿಫೆಸ್ ಹೊಂದಿರುತ್ತದೆ.
17. ಸ್ಪರ್ಧಾ ವಿಭಾಗದ ತೀರ್ಪುಗಾರರ ಮೇಲೆ ಒತ್ತಡ ಹೇರುವುದು, ಶಿಫಾರಸು ಮಾಡಿಸುವುದು ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡದ್ದೇ ಆದಲ್ಲಿ ಅಂತಹ ಅರ್ಜಿದಾರರು ಪ್ರಶಸ್ತಿಗೆ ಅರ್ಜಿಸಲ್ಲಿಸುವ ಪ್ರಕ್ರಿಯೆಯಿಂದ ಮೂರು ವರ್ಷಗಳ ಕಾಲ ಅನರ್ಹರಾಗುತ್ತಾರೆ. ತೀರ್ಪುಗಾರರ ಮಂಡಳಿಯ ಯಾವುದೇ ಸದಸ್ಯರಿಗೆ ಪತ್ರ ಬರೆಯುವುದು, ಇಮೇಲ್ ಮೂಲಕ ಸಂಪರ್ಕಿಸುವುದು, ದೂರವಾಣಿಯ ಮೂಲಕ ಸಂಪರ್ಕಿಸಲು ಯತ್ನಿಸುವುದು, ವೈಯಕ್ತಿಕವಾಗಿ ಭೇಟಿಯಾಗುವುದು, ಯಾವುದೇ ವ್ಯಕ್ತಿಯಿಂದ ಶಿಫಾರಸು ಮಾಡಿಸುವುದು, ಎಲೆಕ್ಟ್ರಾನಿಕ್ ಮೀಡಿಯಾ, ಪ್ರಿಂಟ್ ಮೀಡಿಯಾ, ಸೋಶಿಯಲ್ ಮೀಡಿಯಾ ಇತ್ಯಾದಿಗಳನ್ನು ಬಳಸಿ ಶಿಫಾರಸು ಮಾಡುವುದು ಅನರ್ಹತೆಗೆ ಕಾರಣವಾಗುತ್ತದೆ.
ವಿವಾದಗಳ ಸಂದರ್ಭದಲ್ಲಿ.
18. ಚಿತ್ರೋತ್ಸವಕ್ಕೆ ಸಂಬಂಧಪಟ್ಟ ನಿರ್ಮಾಪಕರು ಮತ್ತು ಬಿಫೆಸ್ ನಡುವೆ ಯಾವುದೇ ರೀತಿಯ ವಿವಾದ ಉದ್ಭವಿಸಿದ ಪಕ್ಷದಲ್ಲಿ, ವಿವಾದವನ್ನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಮುಂದೆ ತರಲಾಗುವುದು. ಈ ವಿಷಯದಲ್ಲಿ ಅವರು ನೀಡುವ ತೀರ್ಮಾನವೇ ಅಂತಿಮವಾಗಿದ್ದು, ಉಭಯತ್ರಯರೂ ಅದಕ್ಕೆ ಬದ್ಧರಾಗಿರಬೇಕಾಗುತ್ತದೆ.
ವ್ಯವಹರಿಸಬೇಕಾದ ವಿಳಾಸ:
ಕಲಾತ್ಮಕ ನಿರ್ದೇಶಕರು,
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ,
ಕರ್ನಾಟಕ ಚಲನಚಿತ್ರ ಅಕಾಡೆಮಿ, ಅಮೃತೋತ್ಸವ ಭವನ ಸಂಕೀರ್ಣ,
# 20/ಎ, ಸರ್ಕ್ಯುಲರ್ ರೋಡ್, ನಂದಿನಿ ಎಫ್ ಎಚ್ ಎಸ್ ಬಡಾವಣೆ,
ನಂದಿನಿ ಲೇಔಟ್ ಪೊಲೀಸ್ ಸ್ಟೇಷನ್ ಬಳಿ, ಪ್ರೆಸಿಡೆನ್ಸಿ ಶಾಲೆಯ ಪಕ್ಕ,
ಬೆಂಗಳೂರು-560 096
+91 80-23494255 / 080 23493410 / +91 8904645529
ಸೋಮ-ಶನಿ: 10.00am - 06.00pm
ಇ- ಮೇಲ್ : biffesblr@gmail.com
ವೆಬ್ ಸೈಟ್: www.biffes.org
ಚಲನಚಿತ್ರಗಳ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : Submissions@biffes.org
ವಿಶೇಷ ಸೂಚನೆಗಳು:
-
ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾದ ಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲು, ಇಂಗ್ಲಿಷ್ ಉಪಶೀರ್ಷಿಕೆ ಇರುವ ಚಲನಚಿತ್ರದ ಡಿಸಿಪಿ ಪ್ರತಿಯನ್ನು, ಫೆಸಿಕಲ್ ಡಿಸಿಪಿ ಅಥವಾ ಡಿಜಿಟಲ್ ಡೆಲಿವರಿ ಮೂಲಕ ಸಲ್ಲಿಸಬೇಕು.
-
ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಚಲನಚಿತ್ರಗಳನ್ನು ಫೆಬ್ರವರಿ 15ರ ನಂತರ ಹಿಂಪಡೆಯುವಂತಿಲ್ಲ.
-
ತಾಂತ್ರಿಕ ಕಾರಣಗಳಿಂದ ತಮ್ಮ ನಿರ್ಮಾಣದ ಚಲನಚಿತ್ರಗಳನ್ನು ಆನ್ಲೈನ್ನಲ್ಲಿ ಕಳುಹಿಸಲು ಸಾಧ್ಯವಾಗದಿದ್ದಲ್ಲಿ ಚಲನಚಿತ್ರಕ್ಕೆ ಸಂಬಂಧಪಟ್ಟವರು ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ಚಲನಚಿತ್ರೋತ್ಸವ ಸಮಿತಿ ಕಚೇರಿಗೆ ಆಗಮಿಸಿ, ಸಿಬ್ಬಂದಿಯ ನೆರವು ಪಡೆದು ಚಿತ್ರದ ಆನ್ ಲೈನ್ (ಸ್ಕ್ರೀನರ್ ಲಿಂಕ್) ಪ್ರತಿ ನೀಡಬಹುದು.
-
ಚಿತ್ರೋತ್ಸವಕ್ಕೆ ಸಂಬಂಧಪಟ್ಟಂತೆ ಮೇಲ್ಕಂಡ ಎಲ್ಲ ನಿಯಮಾವಳಿಗಳು ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗೆ ಒಳಪಡುತ್ತವೆ.
ಸ್ಪರ್ಧಾ ವಿಭಾಗಕ್ಕೆ ಚಲನಚಿತ್ರ ಅರ್ಜಿಗಳನ್ನು 9.1.2025 ರಿಂದ ಆನ್ ಲೈನ್ ಮೂಲಕ ಸಲ್ಲಿಸಬಹುದು.
ಸ್ಪರ್ಧಾ ವಿಭಾಗಕ್ಕೆ ಚಲನಚಿತ್ರ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 23.01.2025