ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ರಾಜಧಾನಿ ಬೆಂಗಳೂರು ನಗರದಲ್ಲಿ ಸಾಂಸ್ಕೃತಿಕ ವೈಭವದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವ, ಪಿಯಾಫ್ (FIAPF) ಮಾನ್ಯತೆ ಪಡೆದಿರುವ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 15ನೇ ಆವೃತ್ತಿಗೆ ಪ್ರವೇಶಿಸುತ್ತಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹೆಜ್ಜೆ ಗುರುತುಗಳು ಐತಿಹಾಸಿಕವಾಗಿವೆ. 2006 ರಲ್ಲಿ ರೂಪುತಳೆದು ವರ್ಷದಿಂದ ವರ್ಷಕ್ಕೆ ಎಲ್ಲ ವಿಧದಲ್ಲೂ ಎತ್ತರಕ್ಕೇರಿದ್ದಲ್ಲದೆ, ಕಳೆದ 14 ವರ್ಷಗಳ ನಡೆಯಲ್ಲಿ ಪ್ರಬುದ್ಧ ಚಲನಚಿತ್ರೋತ್ಸವ ಎಂಬ ಖ್ಯಾತಿಯನ್ನು ಪಡೆದಿದೆ. ಸಿನಿ ಉತ್ಸುಕರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವೆಂದರೆ ಹಬ್ಬವೇ ಸರಿ. ಸಿನಿಮಾದ ಹೊಸ ಅನುಭವ, ಬೆಳವಣಿಗೆ ಎಲ್ಲವೂ ಒಗ್ಗೂಡಿದ ಹೊಸ ಅನುಭವವನ್ನು 15ನೇ ಚಲನಚಿತ್ರೋತ್ಸವದಲ್ಲಿ ಕಾಣಲಿದ್ದೀರಿ.

ಕರ್ನಾಟಕ ಸರ್ಕಾರದ ವತಿಯಿಂದ ನಡೆಯುವ ಈ ಚಲನಚಿತ್ರೋತ್ಸವವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸುತ್ತವೆ.15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 29 ರಿಂದ ಮಾರ್ಚ್ 07, 2024ರ ವರೆಗೆ ಬೆಂಗಳೂರಿನಲ್ಲಿ ನಡೆಯುತ್ತದೆ. ಕರ್ನಾಟಕದ ವೈಭವಯುತ ಪರಂಪರೆ, ಸಾಹಿತ್ಯ, ಕಲೆ, ಸಂಸ್ಕೃತಿ, ಸಿನಿಮಾ, ಮೊದಲಾದ ಸಾಧನೆಗಳ ನಡುವೆಯೇ ಅಂತಾರಾಷ್ಟ್ರೀಯ ಸಿನಿಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಂಗಳೂರು ಬೆಳೆದು ನಿಂತಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹಿಂದಿನ ಆವೃತ್ತಿಗಳಲ್ಲಿ ಪ್ರತಿ ವರ್ಷವೂ 50ಕ್ಕೂ ಅಧಿಕ ರಾಷ್ಟ್ರಗಳಿಂದ ಬಂದ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳನ್ನು 14 ಚಿತ್ರಪರದೆಗಳಲ್ಲಿ ಪ್ರದರ್ಶಿಸಲಾಗಿದೆ. ಪ್ರತಿ ಆವೃತ್ತಿಯಲ್ಲೂ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ವಿವಿಧ ಸಂವೇದನೆ, ವಸ್ತುವಿರುವ ಚಲನಚಿತ್ರಗಳನ್ನು ವೀಕ್ಷಿಸಿದರಲ್ಲದೆ, ಸಿನಿಮಾಗಳ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಗಮನಾರ್ಹ ಸಂಗತಿ.

ಜಾಲತಾಣ ವಿನ್ಯಾಸ,ಅಭಿವೃದ್ಧಿ ಮತ್ತು ನಿರ್ವಹಣೆ, ಮ್ಯಾಕ್ವೇರ್ ಟೆಕ್ನಾಲಜಿಸಿ ಎಲ್ ಎಲ್ ಪಿ

ಪ್ರತಿನಿಧಿ ನೋಂದಾವಣೆ ನಿರ್ವಹಣೆ ಮ್ಯಾಕ್ವೇರ್ ಟೆಕ್ನಾಲಜಿಸಿ ಎಲ್ ಎಲ್ ಪಿ

ಇನ್ನಷ್ಟು ಓದಿ
img

BIFFES 2024

img
Biffes

ವಿಭಾಗಗಳು

ಮಾರ್ಗಸೂಚಿ

ಕಛೇರಿ
ನಂದಿನಿ FHS ಲೇಔಟ್,
ಪ್ರೆಸಿಡೆನ್ಸಿ ಶಾಲೆ ಪಕ್ಕ ,
ಬೆಂಗಳೂರು 560 096
ಸಂಪರ್ಕಿಸಿ
biffesblr@gmail.com

ಕಛೇರಿ

ನಂದಿನಿ FHS ಲೇಔಟ್,
ಪ್ರೆಸಿಡೆನ್ಸಿ ಶಾಲೆ ಪಕ್ಕ,
ಬೆಂಗಳೂರು 560 096
+91 8904645529