ರಾಜಧಾನಿ ಬೆಂಗಳೂರು ನಗರದಲ್ಲಿ ಸಾಂಸ್ಕೃತಿಕ ವೈಭವದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವ, ಪಿಯಾಫ್ (FIAPF) ಮಾನ್ಯತೆ ಪಡೆದಿರುವ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 15ನೇ ಆವೃತ್ತಿಗೆ ಪ್ರವೇಶಿಸುತ್ತಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹೆಜ್ಜೆ ಗುರುತುಗಳು ಐತಿಹಾಸಿಕವಾಗಿವೆ. 2006 ರಲ್ಲಿ ರೂಪುತಳೆದು ವರ್ಷದಿಂದ ವರ್ಷಕ್ಕೆ ಎಲ್ಲ ವಿಧದಲ್ಲೂ ಎತ್ತರಕ್ಕೇರಿದ್ದಲ್ಲದೆ, ಕಳೆದ 14 ವರ್ಷಗಳ ನಡೆಯಲ್ಲಿ ಪ್ರಬುದ್ಧ ಚಲನಚಿತ್ರೋತ್ಸವ ಎಂಬ ಖ್ಯಾತಿಯನ್ನು ಪಡೆದಿದೆ. ಸಿನಿ ಉತ್ಸುಕರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವೆಂದರೆ ಹಬ್ಬವೇ ಸರಿ. ಸಿನಿಮಾದ ಹೊಸ ಅನುಭವ, ಬೆಳವಣಿಗೆ ಎಲ್ಲವೂ ಒಗ್ಗೂಡಿದ ಹೊಸ ಅನುಭವವನ್ನು 15ನೇ ಚಲನಚಿತ್ರೋತ್ಸವದಲ್ಲಿ ಕಾಣಲಿದ್ದೀರಿ.
ಇನ್ನಷ್ಟು ಓದಿಚಲನಚಿತ್ರೋತ್ಸವವನ್ನು ಉತ್ತುಂಗಕ್ಕೇರಿಸುವಲ್ಲಿ ನಮ್ಮ ಪಾಲುದಾರರ ಪಾತ್ರ ಪ್ರಮುಖವಾಗಿದ್ದು, ಇವರ ಸಹಕಾರದೊಂದಿಗೆ ಅವಿಸ್ಮರಣೀಯ ಚಿತ್ರೋತ್ಸವ ಆಚರಿಸುತ್ತಿದ್ದೇವೆ.